Thursday, July 15, 2010

ಸತ್ಯ,ಅಸತ್ಯ,ಸುಳ್ಳು

:


ಸತ್ಯವೆನ್ನುವುದು ಅತಿ ಕ್ಷಣಿಕ ಜೀವಿ. ಮೋಂಬತ್ತಿಯ ಉರಿಯಂತೆ ಬಹಳ ಜಾಗೃತಿಯಾಗಿ ಅದನ್ನು ಉಳಿಸಿಕೊಳ್ಳಬೇಕು.

ಇಲ್ಲದ್ದಿದ್ದಲ್ಲಿ ಕ್ಷಣಾರ್ಧದಲ್ಲಿ ನಂದಿ ಹೊಗುತ್ತದೆ. ಜನಗಳ ಜ್ಞಾಪಕ ಶಕ್ತಿಯಂತೆ ಅದರ ಇರುವಿಕೆಯೂ ಅಳಿಸಿ ಮರೆತು ಹೋಗುತ್ತದೆ.

ಅಸತ್ಯ ಸತ್ಯ ಎನ್ನುವ ನಾಣ್ಯದ ಇನ್ನೊಂದು ಮುಖ. ತದ್ವಿರುದ್ಧ. ಚಿರಸ್ಥಾಯಿ. ಗಟ್ಟಿ ಜೀವ.

ಅದನ್ನು ಎಷ್ಟು ಪ್ರಯತ್ನಿಸಿದರೂ ನಾಶ ಮಾಡಲು ಸಾಧ್ಯವಿಲ್ಲ. ವರ್ಷಾನು ಗಟ್ಟಲೆಯಾದರು ಅಸತ್ಯ ಸಾಯದು. ಮುಚ್ಚಿಡಲೂ ಆಗದು.

ಸುಳ್ಳು ಸತ್ಯವನ್ನು ಮುಚ್ಚಿಡಲು ಮಾನವನು ತನ್ನ ಅನುಕೂಲಕ್ಕೆ ಅಳವಡಿಸಿಕೊಂಡ ಉಡುಪು. ಹಾಗು, ಸತ್ಯ ಅಸತ್ಯಗಳನ್ನು ಬೆತ್ತಲೆ ನೋಡಲು ಧೈರ್ಯವಿರದ ಮಾನವನ ಸಂಕೋಚ, ಪುಕ್ಕಲು ಪ್ರವೃತ್ತಿಯ ಸಂಕೇತ. ಇದನ್ನು ಭಗವಂತ ಅಡಂ ಮತ್ತು ಈವ್ ಅವರೊಡನೆಯೇ ಸೃಷ್ಟಿಸಿದನೇನೋ?

ಸತ್ಯ ಅಸತ್ಯ ಎಂದು ಬರಿ ಕಪ್ಪು ಬಿಳುಪೆಂದು ನಿರ್ಧರಿಸುವುದು ಅತಿ ಧೀರತ್ವ. ಈ ಚೈತನ್ಯ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕೇ ಏನೋ ಮಾನವ ಸಮಾಜ ಕಪ್ಪು ಬಿಳುಪಿನ ಮಧ್ಯೆ ೨೫೫ ದರ್ಜೆಗಳನ್ನು ಕಲ್ಪಿಸಿರುವುದು.

ಇದನ್ನು ಉದಾಹರಣೆ ಎನ್ನುವ ಕಿಡಕಿಯ ಮೂಲಕ ನೋಡಿದಾಗ ಸುಲಭವಾಗಿ ಅರ್ಥವಾಗುತ್ತದೆ.

ಮುನಿರತ್ನ ಕೊಲೆ ಗೋಡೆ ಕಂಟ್ರಾಕ್ಟರ್, ಕಾರ್ಪೊರೇಟರ್, ಇತ್ತೀಚಿನ ಸುದ್ದಿಯಲ್ಲಿರುವವ.

ಸಂಜನಾ ಸಿಂಗ್ ಅವನು ಕಟ್ಟಿದ ಗೋಡೆ ಕೆಳಗೆ ಸಿಕ್ಕಿ ಸತ್ತ ಮರುದಿನ, ಮರುಗಿ

೧ ಕೋಟಿ ರೂಪಾಯಿ ಪರಿಹಾರ ಕೊಡಲು ಸಿದ್ಧವಿದ್ದವ.

ಆಗ ಸತ್ಯ ಅವನಿಗೂ ಅರಿವಿತ್ತು. ತಾನು ಕಟ್ಟಿದ ಕೀಳು ಮಟ್ಟದ ಗೋಡೆಯೇ ಅವಳ ಸಾವಿಗೆ ಕಾರಣ ಎಂದು ಚೆನ್ನಾಗಿ ಅರಿತಿದ್ದ. ಆ ಅಪರಾಧ ಪ್ರಜ್ಞೆಯೇ ಅವನನ್ನು ಹಾಗೆ ಮಾತಾಡಲು ಪ್ರೇರೆಪಿಸಿದ್ದು.

ಮಾನವ ಸಹಜ ಪುಕ್ಕಲು, ಲೋಭಕ್ಕೆ ಆ ಸಮಯದಲ್ಲಿ ತಾಣವಿರಲ್ಲಿಲ್ಲ.

ಸಮಯ ಸರಿದಂತೆ ಆ ಭಾವನೆಗಳು ಮತ್ತೆ ತುಂಬಿಕೊಂಡವು. ತಾನೊಬ್ಬನೇ ಆ ಅನ್ಯಾಯದಲ್ಲಿ ಲಾಭ ಪಡೆದವನಲ್ಲ? ಏನೂ ಮಾಡದೆಯೇ ಆ ೮೦೦ ಅಡಿ ಗೋಡೆಯಿಂದ ಲಕ್ಷಾಂತರ ಗಳಿಸಿ ಕೊಂಡಿರುವ ಇತರರೂ ಆ ಕೊಲೆಗೆ ಹೊಣೆ ಅಲ್ಲವೇ? ತಾನೊಬ್ಬನೇ ಯಾಕೆ ಪರಿಹಾರ ಕೊಡಬೇಕು? ಹಾಗು ಜೈಲೂ ಸೇರ ಬೇಕು? ಯೋಚನೆಗಳು ಬಂದಕೂಡಲೇ ಈ ಉಡುಪುಗಳನ್ನು ಹೇಗಾದರೂ ಮಾಡಿ ಆ ಸತ್ಯಕ್ಕೆ ಉಡಿಸಿ ಅಸತ್ಯವನ್ನಾಗಿಸಲು ಪ್ರಾರಂಭಿಸಿದ. ಉಡುಪು ಒಂದು ರೀತಿಯಲ್ಲಿ

ಸುಳ್ಳೇ ಸೈ! ಅದು ನಿಜವನ್ನು ಮುಚ್ಚಿಡುತ್ತದೆ ಅಲ್ಲವೇ? ಅಲ್ಲ ಅದರ ಕರ್ತವ್ಯವೇ ಅದಲ್ಲವೇ?

ಈಗ ಅದು ತಾನು ಬರೇ ಸಪ್ಪ್ಲೇಯರ್ ತನ್ನ ಹೊಣೆ ಏನೂ ಇಲ್ಲ ಎಂದು ನಾಟಕ ಶುರು ಮಾಡಿದ್ದಾನೆ. ಇದು ಎಲ್ಲಾ ಅಪರಾಧಿಗಳ ಧಾಟಿಯೇ. ಕುಡಿದು ಪ್ರಾಣ ಹಾನಿ ಮಾಡಿದ ನಂದಾ, ಸಾಲ್ಮಾನ್ ಖಾನ್ ಅವರ ಗಾಡಿ ಮಾಲೀಕ ನಾನಲ್ಲ ಬರೇ ಚಾಲಕ ಎನ್ನುವ ಸಬೂಬಿನಂತೆ.

ಮುಂದೆ ಮುನಿರತ್ನಂ ಎಲ್ಲಾ ತಪ್ಪಿತಸ್ಥರಂತೆ ತನಗೆ ಅನ್ಯಾಯವಾಗಿದೆ ಎಂದು ಸರ್ಕಾರದಿಂದ ಏಕೆ ಸಿಂಗ್ ರವರ ಪರಿವಾರದಿಂದಲೇ ಪರಿಹಾರ ಕೇಳಲು ಶುರು ಮಾಡಿದರೂ ಆಶ್ಚರ್ಯವೇನಿಲ್ಲ. ಅದಕ್ಕೆ ಅವನನ್ನು ಪ್ರತಿನಿಧಿಸಲು ಈ ನಡುವೆ ಅನೇಕ ವಕೀಲರೂ ಸಿದ್ಧವಿರುತ್ತಾರೆ!

ಹಾಗಿರುವಾಗ ಸುಳ್ಳು , ಸತ್ಯ ಅಸತ್ಯಗಳನ್ನು ಮುಚ್ಚಿಡಲು ಮಾಡಿರುವ ಮಾನವ ನಿರ್ಮಿತ ಉಡುಪು ಅನ್ನಿಸುವುದಿಲ್ಲವೇ?







--

M.B.Nataraj

MS(Georgetown Univ, Wash DC)

Registered Medical Technologist

American Medical Technologists-USA

Microbiologist/Medical Technologist

Bangalore-560086

No comments:

Post a Comment