Thursday, May 20, 2010

The Fourth Monkey







20 May 2010,

"See no Evil,
Hear no Evil
and Speak No Evil"
exhorted Mahatma Gandhi, the father and architect of our freedom,nation and people.
At 1billion plus we have a lot of say in what happens in the world.
As a potentially a great power atleast people power, as the biggest English speaking country in the world,
We could have much more say if we so chose.
After sixty plus years of independence, we quote Mahatma Gandhi at every opportunity.
We quote Jawaharlal Nehru, Tagore, and Indira Gandhi and many others to SUIT our convenience.
To convince ourself we are practising the ideals they advocated.
These are just balms to our guilty souls.
Lets see what we are doing.
Gandhiji Did not say
do not see what you should see,
do not hear what you should hear ,
do not speak what you should speak?
did he?
Because these three S's Sight, speech and sound, are essentials of two way communication between human beings and the world.
Loss of any one sense, -sight, speech or hearing makes us disabled human beings.
we fail to perceive 1/3 apporximately of the world with each loss of sense.
Now let us see what we have done with this piece of wisdom Mahatma Gandhi gave.
We have conveniently misinterpreted it to suit us.
The misuse of power, corruption, political rot, murder, mayhem, total disrespect for rule of law, blatant violations,
of cultural and social values, destruction of the environment by blind pursuit of lucre and "modern" automobile driven life
WE DONOT SEE.
The constant irreversible destruction of our very important sense- hearing- by noise by blind(literally) worship of modernization,
honking, industrial noises, "city" living, etc
WE DONOT HEAR
WE DONOT SEE OR HEAR,
WE ALSO DONOT SPEAK. for fear of what might happen?

We practise a gross distorted version of "speak now or forever hold your your peace!"

It is a well known fact that children born deaf will not be able to speak.

But we have chosen to be dumb even about things we should be constantly concerned about
the evils that are happening around us.


We have added a fourth monkey.
A very shameful monkey. A do nothing monkey.
Totally unconceivable and incomprehensible to Mahatma Gandhi.
One of the greatest Karmayogis the world has ever known.
Even in the wildest of his imagination.





WE DO NOTHING.
We do not do even when we can, What we can.
We wait for others to come by.
We are still waiting after sixty years of spoon feeding, someone to come by and spoonfeed us.
Successive governments will spoon feed us, atleast some of us at the cost of the others.
For VOTES SAKE. Not for who you are or what you have become or what the society has made of you.
We will wait for the mythical hindu Eternity.
for ever?

The fact that we are sitting with our arms crossed around our paunch- even those in the early 20s now a days have a respectable paunch of a 50 year old of the old days!
WE DO NOT ACT.
We are the most fatalistic, pessimistic people.
For ever looking for excuses not to do our minimal duty.
What is worse is we do not let others do their duty either.
Have you seen the way traffic violators argue for hours with the authorities about the pittance 100 or 200 rupees fine?
"It is not about the money......
it is the principle...
. ...I will apologize ...... but penalty please excuse sir....."
we are willing to grovel, beg even apologize to save that 100 rupees!
But our "sense of shame" does not extend to standing up.
and saying we violated a civic law which endangers, inconveniences, disrupts others lives and we will pay the penalty.
After all our penalties are peanuts.
10,000 for killig a human being while driving drunk!
However the pride makes us to beg, influence, grovel to ground zero so we can get away with the violation.
What is more many of us boast about that as an accomplishment?
How we subverted justice!
Particularly rubbing it into those who choose to pay the penalty dignifiedly?
We pervert justice, truth, law and order through influence in this land of Satyameva Jayate and
as if that is not enough we scorn and scoff those few who abide by law.


We crown our inactions, with the pearls of Hindu wisdom.
Karmani yeva adhikarah te, maa phaleshu kadachana.
your right is to work only and not to the fruit thereof.
Birth and death are the only two certain things in life.
or everything is predestined.

what else can be done by 1 billion Indians instead?

Practise Swami Vivekananda- "Awake, Arise, Stop not till the Goal is reached".

Practise Reinhold Niebur-
- atleast as much as we can?

Have the courage to act when you can and pray for the wisdom to know what you can do and what you cannot.
Atleast have the COURAGE to do things that you can and ACT.
and NOW.
M B Nataraj
2010.

Tuesday, May 18, 2010

ವಾಹನಾಸುರನ ಯಗ್ನಪಶು ಬೆಂಗಳೂರು ೨: ಚಾಲಕರನ್ನು ನಿಯಂತ್ರಿಸಿ.


ಬೆಂಗಳೂರಿನ ೪೫೦೦ ಕಿ.ಮಿ. ರಸ್ತೆಗಳ ಉದ್ದಗಲಗಳನ್ನು ದೊಡ್ಡದು ಮಾಡುವುದು ಸುಲಭವೇನಲ್ಲ, ಸಾಧ್ಯವೂ ಇಲ್ಲ.
ಅಜೀವ ವಸ್ತುವಾದ ವಾಹನ ಅಸುರನಂತೆ ವರ್ತಿಸುವುದು ಅದರ ಮೇಲೆ ಚಾಲಕ ಕುಳಿತಾಗಲೇ.
ಒಂದು ವಿಧದಲ್ಲಿ ಚಾಲಕನಿಗೇ ಬ್ರಹ್ಮನ ಪಟ್ಟವೂ ದೊರಕಿದ ಹಾಗೆ ಅಲ್ಲವೇ?
ಹರಿತವಾದ ಚಾಕು, ರೌಡಿಯ ಹಸ್ತದಲ್ಲಿ ಪ್ರಾಣಹಾನಿ ಮಾಡಬಲ್ಲುದು.
ಅದೇ ಚಾಕು ಶಸ್ತ್ರ ತಜ್ಞನ ಕೈಯಲ್ಲಿ ಜೀವ ಉಳಿಸುತ್ತದೆ.
ಹಾಗೆಯೇ ಬಂದೂಕು ಮತ್ತು ವಾಹನ ಚಾಲಕನ ಲೈಸೆನ್ಸ್ ಕೂಡ. ಪ್ರಾಣಾಂತಿಕ.
ವಾಹನ ಚಾಲನೆ ಜನ್ಮ ಸಿದ್ಧ ಹಕ್ಕಲ್ಲ. ಸಮಾಜ ತನ್ನ ಹಿತಕ್ಕಾಗಬಹುದಾದ ಧಕ್ಕೆಯನ್ನು ಅರಿತೂ , ನೀಡಿರುವ ವರ, ಭಾಗ್ಯ ಎಂದು ಭಾವಿಸಿ ಮಿತವಾಗಿ ಉಪಯೋಗಿಸಿ ಕೊಳ್ಳ ಬೇಕು.
ವರ ನೀಡಿದ ಹಸ್ತ ಹಿಂಪಡಿಯಲೂ ಬಹುದು.
ಆ ಅಧಿಕಾರ ಸಮಾಜಕ್ಕೆ ಇದೆ.
ಇಲ್ಲಿಯ ತನಕ ಆ ಅಧಿಕಾರವನ್ನು ಚಲಾಯಿಸಿಲ್ಲ ಎನ್ನುವುದು ಹೇಡಿತನದ, ಕೈಲಾಗದ ಲಕ್ಷಣ ಎಂದು ನಾವು ಸೊಕ್ಕಬಾರದು.
ಅದನ್ನು ದುರುಪಯೋಗ ಪಡಿಸ ಬಾರದು. ಈ ಪ್ರಜ್ಞೆ ಒಂದು ವಿಧದಲ್ಲಿ ತಂದೆ ತಾಯಿಗಳು ಮಕ್ಕಳಲ್ಲಿ ಮೊದಲಿನಿಂದಲೂ ಬೆಳೆಸಬೇಕು.
ಆದರೆ ಈ ನಮ್ಮ ನಾನು, ನನ್ನದು ಮತ್ತು ನನಗೆ ಎನ್ನುವ ಸ್ವಾರ್ಥಿತ್ವ ಪ್ರಾಧಾನ್ಯ ಸಮಾಜದಲ್ಲಿ ಅನೇಕರು ಯಾವತ್ತಿಗೂ ಕಲಿಯುವುದೇ ಇಲ್ಲ.
ಕೊನೆಯವರೆಗೆ ಕಲಿಯದಿದ್ದಲ್ಲಿ ಆವರ ವೈಯಕ್ತಿಕ ಜೀವನ ಸುಗಮವಾಗಿ ನಡೆಯದೆ ಇರಬಹುದು.
ಆದರೆ ಇದೇ ಮನೋಭಾವವನ್ನು ರಸ್ತೆ ಎಂಬ ರಂಗ ಭೂಮಿಯಲ್ಲಿ ತಳೆದಲ್ಲಿ ಅದು ರಣಭೂಮಿಯಾಗಿ ಪರಿವರ್ತಿಸುವುದು.
ಈ ಹುಟ್ಟು ಗುಣಗಳು ಚಾಲನೆಯ ವಿಧದಲ್ಲಿ ಮತ್ತು ಚಾಲಕನ ನಡವಳಿಕೆಯಲ್ಲಿ ಹೊರಗಿನವರಿಗೆ ಕಾಣಿಸಿಕೊಳ್ಳುತ್ತದೆ.
ದುರದೃಷ್ಟವಶಾತ್ ಇದೇ ಸಮಾಜದ ಪ್ರತಿಬಿಂಬವಾಗಿ ಬಿಡುತ್ತದೆ.
ರಸ್ತೆಯಲ್ಲಿ ಸಾವಿರಾರು ವಾಹನಗಳು ಸರಿಯಾಗಿ ಸುರಕ್ಷವಾಗಿ ಎಲ್ಲಾ ಕಾಯ್ದೆಗಳ ಅನುಸಾರ ಓಡಾಡುತ್ತಿದ್ದರೂ, ಒಂದೇ ಒಂದು
ಸರಿಯಾಗಿಲ್ಲದ್ದಿದ್ದಲ್ಲಿ, ಎಲ್ಲರ ಹೆಸರೂ ಹಾಳಾಗುತ್ತದೆ. ೧೦೦೦ ಸಿ ಸಿ ಹಾಲು ಒಂದು ಹನಿ ನಿಂಬೆ ರಸದಿಂದ ಓಡೆದಂತೆ.
ಈ ಅಂಶವನ್ನು ಅವರ್ಯಾರೋ ಒಬ್ಬರು ಸರಿಯಾಗಿ ಓಡಿಸದಿದ್ದರೆ ನಮಗೇನಾಯ್ತು ಎಂಬ ಧೋರಣೆ ತಳಿದಿರುವರು ಮರೆಯ ಕೂಡದು .
ಅವರ್ಯಾರದೋ ತಪ್ಪು ಕೆಲಸ ನಮ್ಮ ಹೆಸರನ್ನೂ ಕೆಡಿಸುತ್ತದೆ!
ಆ ಒಂದೇ ಕಾರಣಕ್ಕೊಸ್ಕರವಾಗಿಯಾದರೂ , ನಾವೆಲ್ಲರೂ ನಮ್ಮೆಲ್ಲರನ್ನೂ ಬೆಂಗಳೂರಿನ ರಸ್ತೆಗಳಲ್ಲಿ ಏನಾಗುತ್ತಿದೆ, ನಾವೇ ನು ಮಾಡ ಬಹುದು ಎಂದು ಸಂಪೂರ್ಣ ತೊಡಗಿಸಿಕೊಳ್ಳಲು ಸಾಕು.
ಕಾನೂನು ಬಾಹಿರ ಚಾಲನಾ ವಿಧಾನ, ಭಂಗಿ ಎರಡೂ ರಸ್ತೆ ಸಂಚಾರಿಗಳಲ್ಲಿ ಕ್ರೋಧ ಕೋಪ ಉಂಟು ಮಾಡುತ್ತದೆ.
ಹಾಗೂ ಕಾನೂನಿನ ಹತೋಟಿ ಏನಾದರೂ ಇದೆಯೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ.
ಅದೇ ಕ್ಷಣದಲ್ಲಿ ಇಲ್ಲ ಅನ್ನುವ ಉತ್ತರವೂ ಹುಟ್ಟಿಕೊಂಡು ಬಿಡುತ್ತದೆ.
ಈ ಬಗೆಯ ನಡವಳಿಕೆಯನ್ನು ತಡೆದು ಕೊಳ್ಳುತ್ತಿರುವ ಕಾನೂನು ಹಾಗು ಸಮಾಜದ ಬಗ್ಗೆ ತಾತ್ಸಾರ
ಉದ್ಭವವಾಗುತ್ತದೆ.
ಇದು ಕಾಲಾಂತರ ಒಟ್ಟುಗೂಡಿ, ಸಂಯಮತೆಯ ಎಣೆ ತಲುಪುತ್ತದೆ.
ಪ್ರಕೋಪಕ್ಕೆ ಬದಲಾಯಿಸಿ ಹೋಗಿ ರಸ್ತೆ ರೋಷವಾಗಿ ಹೊರಬಿದ್ದು ಪ್ರಾಣ ಆಸ್ತಿ ಹಾನಿ ಗಳು ಉಂಟಾಗಿರುವುದು ಕಂಡಿದ್ದೇವೆ. ನವದೆಹಲಿಯಲ್ಲಿ ವ್ಯಾಪಾರಿಯ , ಮುಂಬೈನಲ್ಲಿ ಒಬ್ಬ ನಿವೃತ್ತ ಸೈನ್ಯಾಧಿಕಾರಿಯ ಮೇಲೆ ಹಲ್ಲೆಮಾಡಿ ಹತ್ಯೆಯೂ ಆಗಿದೆ.
ಇವೆಲ್ಲವೂ ಸಮಾಜ ತತ್ಕ್ಷಣ ತಡೆಗಟ್ಟ ಬೇಕಾದ ಅಪರಾಧ.
ಚಾಲನೆಯ ಶೈಲಿ:
ವಿಪರೀತ ವೇಗದ ಓಟ. ಪಾದಚಾರಿಗಳ ಹಕ್ಕುಗಳ ಉಲ್ಲಂಘನೆ. ಕೆಂಪು ದೀಪ ಜಿಗಿಯುವಿಕೆ. ಲೈಸೆನ್ಸ್ ಪಡೆಯಲಾಗದಂತಹ ಅಪ್ರಾಪ್ತ ವಯಸ್ಕರಿಂದ ಚಾಲನೆ. ಏಕ ಮುಖ ರಸ್ತೆಯ ಉಲ್ಲಂಘನೆ.
ಮೊನ್ನೆ ನಾನೇ ಕಂಡ ಒಬ್ಬ ಮೋಟರ್ ಸೈಕಲ್ ಚಾಲಕನ ಪರಮೋಚ್ಚ ಉಲ್ಲಂಘನೆ ಎಂದರೆ ಬಾಯಿಯಲ್ಲಿ ಸಿಗರೆಟ್, ಹೆಲ್ಮೆಟ್ ರಹಿತ, ಸೆಲ್ ಫೋನ್ ಕೈ ಭರಿತ, ಓದಲಾಗದ ಮುಂದಿನ ನಂಬರ್ ಪ್ಲೇಟ್, ರಸ್ತೆಯ ಎಡ ಭಾಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಹಿಂದಿನ ನಂಬರ್ ಪ್ಲೇಟ್ ಹೆಲ್ಮೆಟ್ ನಿಂದ ಮುಚ್ಚಿ ಓದಲಾಗಂದತಹ ಸ್ಥಿತಿ, ಮಕ್ಕಳು ಓಡಾಡುವ ಸ್ಕೂಲ್ ಬಳಿ. ಯಾರಾದರು ಸತ್ತಿದ್ದರೆ ಸಮಾಜವೇ ಹೊಣೆ ಅಲ್ಲವೇ?
ಮೋಟಾರ್ ಸೈಕಲ್ ಹಾಗು ಇತರ ದ್ವಿ ಚಕ್ರ ವಾಹನಗಳಲ್ಲಿ ಒಂದೇ ಚಕ್ರದ ಮೇಲೆ ವಾಹನ ಚಾಲನೆ- ವೀಲಿ.
ಎಡಬದಿ ಚಾಲಕನ ಅಂಧ ಪ್ರದೇಶ (ಬ್ಲೈಂಡ್ ಸ್ಪಾಟ್ ).ಬಲ ತಿರುಗುತ್ತಿರುವರ ಮುಂದೆ ಎಡ ತಿರುಗುವುದು, ಎಡ ತಿರುಗುತ್ತಿರುವವರ ಎಡದಿಂದ ನೇರ ಹಾದು ಹೋಗುವುದು, ಬಲಕ್ಕೆ ತಿರುಗುವುದು . ಅಥವಾ ಮುಂದಾಟುವಿಕೆ (ಒವರ್ ಟೇಕಿಂಗ್), ಹಾವಿನಂತೆ(ವೀವಿಂಗ್) ಲೇನ್ ಬದಲಾವಣೆ.
ಅಖಂಡ ಹಳದಿ (ಸಾಲಿಡ್)ಅಥವಾ ಬಿಳಿ ಪಟ್ಟಿ ದಾಟಿ ಮೀರಿ ಮುಂದಾಟುವಿಕೆ, ಮುನ್ಸೂಚನೆ-ಅವಶ್ಯಕವಾದ ದೀಪಗಳಿಲ್ಲದೆ ಚಾಲನೆ. ಸಿಗ್ನಲ್ ಕೊಡದೆ ಎಡ ಬಲ ಅಥವಾ U ತಿರುಗುವಿಕೆ, ಪಾನ ಮತ್ತ ಚಾಲನೆ.
ಇವೆಲ್ಲವೂ ಚಲಿಸುವ(traffic/moving) ನಿಯಮಗಳ ಉಲ್ಲಂಘನೆ. ಅತೀವ ಪ್ರಾಣ ಹಾನಿ,ಘಾಸಿಕಾರಕ. ನಿಲ್ಲಿಸಿರುವ (ಪಾರ್ಕಿಂಗ್) ಉಲ್ಲಂಘನೆಗಳಿಗಿಂತ ತೀವ್ರತಮ ಅಪಾಯಕಾರಕ ಉಲ್ಲಂಘನೆಗಳೆಂದು ಪರಿಗಣಿಸಲಾಗುತ್ತವೆ. ಈ ಬಾಲಿಶ ಶೈಲಿಯನ್ನು ರಕ್ತ ಗತ ಮಾಡಿ ಕೊಂಡಿರುವ ಚಾಲಕರಿಂದ ಪ್ರೌಢ ಮಟ್ಟದ ಚಾಲನೆಯನ್ನು ಹೇಗೆ ತಾನೇ ಅಪೇಕ್ಷಿಸಬಹುದು?
೨)ಚಾಲಕನ ಭಂಗಿ :
ಸಾಮಾನ್ಯವಾಗಿ ಸೃಜನಶೀಲತೆ, ವಿನಯಶೀಲತೆ, ಸಂಭಾವಿತತೆ ಎಲ್ಲಾ ಪಕ್ವವಾದ ಮೇಲೆ ಕಂಡು ಬರುವ ಗುಣಗಳು.ವೃತ್ತಿಯಿಂದ ಬರತಕ್ಕದ್ದು.ಆದರೆ ದುರದೃಷ್ಟವಶಾತ್ ಮುಕ್ಕಾಲು ಜನ ಚಾಲಕರಿಗೆ ಇರುವುದಿಲ್ಲ. ಕಲಿಯುವ ಪ್ರಯತ್ನವಂತೂ ಮಾಡುವುದೇ ಇಲ್ಲ.ವಿಶೇಷ ವಾಗಿ ಬಸ್, ಆಟೋ ಇತ್ಯಾದಿ. ಅವರ ಜೀವನಾಧಾರವಾದ ಕಸುಬಾದರೂ ಅದಕ್ಕೆ ತಕ್ಕ ಸೂಕ್ತ ವರ್ತನೆ ಕಲಿತಿರುವುದಿಲ್ಲ.
ಇತ್ತೀಚೆಗೆ ಕುಡಿದು ರಸ್ತೆ ಮಧ್ಯದಲ್ಲಿ ನಿಲ್ಲಿಸಿ, ಹಾರನ್ ಬಾಹಿರ ಪ್ರದೇಶದಲ್ಲಿ ಅನಾವಶ್ಯಕ ಹಾರನ್ ಬಾರಿಸುತ್ತಿದ ಚಾಲಕನಿಗೆ ನೊಂದ ಆ ರಸ್ತೆಯ ನಿವಾಸಿಗಳು ಯಾಕಪ್ಪ ಹೀಗೆ ಹಾರನ್ ಹೊಡಿಯುತ್ತೀಯ ಎಂದಾಗ ಅವನು "ನೀನ್ಯಾವನೋ ಕೇಳೋದ್ದಿಕ್ಕೆ, ನಿಮ್ಮಪ್ಪಂದ ರಸ್ತೆ "ಎಂದು ಬಾಯಿಗೆ ಬಂದ ಹಾಗೆ ಕೂಗಾಡಿ ಮತ್ತೆ ಗಾಡಿ ಚಲಾಯಿಸಿ ಕೊಂಡು ಹೋದ. ನಮ್ಮಲ್ಲೇ ತತ್ಕ್ಷಣ ಬರುವ ಪೋಲಿಸಿನವರಿದ್ದರೆ ಹಿಡಿದು ಜುಲ್ಮಾನೆ ಹಾಕಿ ಮತ್ತು ಇಳಿಯುವ ತನಕ ಜೇಲಿನಲ್ಲಿ ಕೂಡಿಸಬಹುದಿತ್ತು. ಆದರೆ ಮನೆ ಎಲ್ಲಿ ಅಂತ ತಿಳಿದಿದ್ದ ಇಂಥ ಪುಂಡರ ಭಂಡತನದಿಂದ ನಿವಾಸಿಗಳನ್ನು ರಕ್ಷಿಸುವ ಸಾಮರ್ಥ್ಯ ಪೋಲಿಸಿನವರಿಗಿದೆಯೇ?
ನಮ್ಮ ಅಧಿಕಾರಿಗಳು ಫಿರ್ಯಾದಿಗಳ ಹೆಸರನ್ನು ಗುಪ್ತವಾಗಿದುವುದರಲ್ಲಿ ಪೂರ ವಿಫಲರಾಗಿದ್ದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ.
ಕೆಲವು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ವಾಜಪೇಯೀ ಅವರಿಗೆ ಪಿ ಡಬ್ಲ್ಯೂ ಡೀಯ, ಅಕ್ರಮ ವಿಚಾರಗಳ ಬಗ್ಗೆ ಫಿರ್ಯಾದಿ ಕಳುಹಿಸಿದ್ದವನನ್ನು ಅಕ್ರಮಿಗಳು ಕೊಂದೇ ಹಾಕಿಬಿಟ್ಟರು. ಇನ್ನೂ ವಿಷಾದಕರ ವಿಷಯ ಏನೆಂದರೆ ಈ ಪ್ರಾಣ ಭಯವೇ ಇದ್ದ ಆತ, ತನ್ನ ಹೆಸರನ್ನು ಗೋಪ್ಯವಾಗಿದ ಬೇಕೆಂದು ಪ್ರಾರ್ಥಿಸಿ ಕೊಂಡಿದ್ದ .
ಇತ್ತೀಚೆಗೆ ಆ ಹಂತಕರಿಗೆ ಜೇಲ್ ಶಿಕ್ಷೆ ಆಯಿತು. ಆದರೆ ಅವಿವೇಕತನದಿಂದ? ಅಥವಾ ಬೇಕಂತಲೇ ಅವನ ಹೆಸರನ್ನು ಬಹಿರಂಗ ಪಡಿಸಿದ ಸರ್ಕಾರಿ ಅಧಿಕಾರಿಗಳಿಗೆ ಏನೂ ಶಿಕ್ಷೆ ಆಗಲಿಲ್ಲವಲ್ಲ? ಏನು ಪ್ರಯೋಜನ?
ಆದರೆ ಹೋದ ಪ್ರಾಣ ಮತ್ತೆ ಬರುತ್ತದೆಯೇ?
ದೀಪಗಳಿಲ್ಲದೆ, ಬ್ರೇಕ್ ಇಲ್ಲದೆ, ಸೈಲೆನ್ಸೆರ್ ಇಲ್ಲದೆ, ಓವರ್ ಲೋಡ್, ಕಪ್ಪು ಗಾಜು, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಇರುವ ರಸ್ತೆಗೆ ಅನರ್ಹವಾದ IMV ಕಾಯ್ದೆ ಬಾಹಿರ ವಾಹನಗಳೆಂದು ಗೊತ್ತಿದ್ದೂ ವಾಹನಗಳನ್ನು ನಡೆಸುವುದು.
ಸುರಕ್ಷಾ ಚಾಲನೆಗೆ ಅಗತ್ಯವಾದ ಕೈಯಿ ಕಾಲು, ಕಣ್ಣು, ಕಿವಿ ಸರಿಯಾಗಿಲ್ಲದಿರುವಾಗ ಇತರರಿಗೆ ಗಂಡಾಂತರ ಎಂದು ಅರಿವಿದ್ದರೂ ವಾಹನ ಚಲಿಸುವುದು .
ನಿದ್ದೆ ಸಾಲದಿರುವಾಗ , ಸುಸ್ತು, ಮದ್ಯ, ಮದ್ದು, ಮಾತ್ರೆ , ಕೋಪ ತಾಪ, ದುಃಖದ, ಉದ್ವೇಗ, ಆವೇಶ, ಉದ್ರೇಕಗಳ, ಮತ್ತಿನಲ್ಲಿ ವಾಹನ ಚಾಲನಾ ಸಾಮರ್ಥ್ಯ ಕುಂದಿದೆ ಎಂದು ಚೆನ್ನಾಗಿ ಗೊತ್ತಿದ್ದರೂ ಓಡಿಸುವುದು.
ವೈಪರೀತ್ಯ ವಾತಾವರಣಗಳಲ್ಲಿ - ದಟ್ಟ ಮಳೆ, ಹೊಗೆ, ಮಂಜು, ಬರ್ಫ ಇತ್ಯಾದಿ ವಾಹನ ಉಪಯೋಗಿಸುವುದು.
ಇವೆಲ್ಲವೂ ಭಂಡ ಧೈರ್ಯದ ಪರಮಾವಧಿ. ಬೆಂಕಿಯೊಡನೆ ಸರಸವಾಡಿದಂತೆ. ಇವೆಲ್ಲವನ್ನು ಖಂಡಿತ ಸಮಾಜ ಸಹಿಸಬೇಕಾಗಿಲ್ಲ, ಸಹಿಸಕೂಡದು ಸಹ .

ಪಾಶ್ಚಾತ್ಯ ದೇಶಗಳಲ್ಲಿ ಈ ಬಗೆಯ ಗಂಭೀರವಾದ ರಸ್ತೆ ಉಲ್ಲಂಘನೆಗಳಿಗೆ ಭಾರಿ ಮೊತ್ತದ ಜುಲ್ಮಾನೆ ಮತ್ತು ಧೀರ್ಗ ಸಜೆ ವಿಧಿಸುತ್ತಾರೆ. ಮತ್ತೆ ಮತ್ತೆ ಮಾಡಿದರೆ ಲೈಸೆನ್ಸ್ ವಜಾ ಮಾಡುತ್ತಾರೆ.
ಆದರೆ ನಮ್ಮಲ್ಲಿ ಏಕೋ ಒಂದು ಬಗೆಯ ನೊಂದವರಿಗೆ ಮೀಸಲಾಗಿರಿಸ ಬೇಕಾದ ಅಯ್ಯೋ ಪಾಪ ಮನೋಭಾವ ಉಲ್ಲಂಘನಾಕಾರರತ್ತ ಅಧಿಕಾರಿಗಳು ತೋರಿಸೋದಲ್ಲದೆ , ಹೊದ್ರೆಹೊಗಲಿ ಅಂತ ನೊಂದವರ ಬಾಯಿ ಮುಚ್ಚಿಸುತ್ತಾರೆ. ಇದರಿಂದ ಉಲ್ಲಂಘನಾಕಾರರಿಗೆ ದುರಹಂಕಾರ, ಸೊಕ್ಕು, ಮತ್ತು ನೊಂದ ಸಾರ್ವಜನಿಕರಿಗೆ ಹತಾಶತೆ, ಕಾನೂನಿನತ್ತ ಅಗೌರವ ಬರುವುದರಲ್ಲಿ ಸಹಜವಲ್ಲವೇ ? ಮಾಡಬೇಕಾದ್ದೇನು?ಮಹಾತ್ಮ ಗಾಂಧೀ ಅವರ ಎಂದೆಂದಿಗೂ ಮರೆಯಲಾಗದ ಬುದ್ಧಿವಾದ.ಕೆಟ್ಟದ್ದನ್ನು ನೋಡ ಬೇಡ, ಕೆಟ್ಟದ್ದನ್ನು ಆಡ ಬೇಡ ,ಕೆಟ್ಟದ್ದನ್ನು ಕೇಳ ಬೇಡ.


ಅದನ್ನು ಅಕ್ಷರಶಃ ಕ್ಕಿಂತ ಒಂದು ಕೈ ಮೇಲೇ ಪಾಲಿಸಿಕೊಂಡು, ನಾವೆಲ್ಲರೂ- ಸಾರ್ವಜನಿಕರೂ, ಅಧಿಕಾರಿಗಳೂ ಕೂಡ ,ನೋಡ ಬೇಕಾದದ್ದನ್ನೂ ನೋಡದೆ, ಕೇಳಬೇಕಾದದ್ದನ್ನೂ -ಯಾಕೆ, ಏನು ಎತ್ತ ಅಂತ ? - ಕೇಳದೆ, ಹೇಳ ಬೇಕಾದದ್ದನ್ನೂ -ಹೀಗೆ, ಹಾಗೆ ಅಂತ - ಹೇಳದೇ, ಮಾಡ ಬೇಕಾದದ್ದನ್ನೂ -ಮಾಡದೆ .



ಕೈಕಟ್ಟಿ ಗಾಂಧೀಜಿಯವರ ಕಲ್ಪನೆಯನ್ನೂ ಮೀರಿ ನಾಲಕ್ಕನೇ ಮಂಗವಾಗಿ ಕುಳಿತಿದ್ದೇವೆ . ಆದ್ದರಿಂದಲೇ ಈ ಹೀನಾಯ ಸ್ಥಿತಿಯನ್ನು ಅನುಭವಿಸುತ್ತಿದೇವೆ.
ಸಾರ್ವಜನಿಕರು, ಈ ತಾಂತ್ರಿಕ ಪ್ರಾಧಾನ್ಯ ಸೆಲ್ ಫೋನ್,ಇಂಟರ್ ನೆಟ್ ಕಾಲದಲ್ಲಿ, ಉಲ್ಲಂಘನಕಾರರ ವಿವರಗಳನ್ನು ಅಧಿಕಾರಿಗಳಿಗೆ ಸಾಧ್ಯವಾದ ಚಿತ್ರ ಇತ್ಯಾದಿ ಪುರಾವೆಗಳೊಂದಿಗೆ ಒದಗಿಸಬೇಕು.
ಅದನ್ನು , ಅಧಿಕಾರಿಗಳು, ಸಾರ್ವಜನಿಕರು ನಿಮ್ಮ ಕೆಲಸ ಸುಗಮಗೊಳಿಸುವ ಮಿತ್ರರು, ಹಿತೈಷಿಗಳು, ಪಕ್ಕೆಯಲ್ಲಿಯ ಮುಳ್ಳುಗಳಲ್ಲ ಎಂದು ಅರ್ಥಮಾಡಿ ಕೊಂಡು,ಅವರ ಕಾನೂನು ನಿಮಿತ್ತ ಕಾರ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಿ ಬೆಂಗಳೂರನ್ನು ವಿಶ್ವ ದರ್ಜೆಯ ನಗರವಾಗಿ ತತ್ಕ್ಷಣ ಮಾರ್ಪಡಿಸ ಬಹುದು ಮಾರ್ಪಡಿಸಬೇಕು..
ಎಲ್ಲರ ಹಿತ ರಕ್ಷಣೆಯೊಡನೆ ನಿಮ್ಮ ಮತ್ತು ಪರಿವಾರದವರ ಆರೋಗ್ಯ ಶಾಂತಿಯೂ ಉಳಿಯುತ್ತದೆ.
ಈ ಸಂಧರ್ಭದಲ್ಲಿ ಖ್ಯಾತ ಪಾಶ್ಚಾತ್ಯ ತತ್ವ ಚಿಂತಕ ರೈನ್ ಹೋಲ್ಡ್ ನೀಬರ್ ಹೇಳಿದ ಉಕ್ತಿ - ಪ್ರಾರ್ಥನೆ ಅತ್ಯುಚಿತ. ಎಲ್ಲರಿಗೂ ಅನ್ವಯಕಾರಕ.

'ದೇವರೇ, ನನ್ನ ಕೈಲಾಗದ ಸನ್ನಿವೇಶಗಳನ್ನು ಅಂಗೀಕರಿಸುವ ತಾಳ್ಮೆ ಯನ್ನು ಕೊಡು,
ಕೈಲಾಗುವ ಸನ್ನಿವೇಶಗಳನ್ನು ಬದಲಾಯಿಸುವ ಧೈರ್ಯ ಸ್ಥೈರ್ಯ ಕೊಡು,
ಆಗುವ ಆಗದ ಸನ್ನಿವೇಶಗಳನ್ನು ತಿಳಿದುಕೊಳ್ಳುವ ಪ್ರಜ್ಞೆ ಯನ್ನು ಕೊಡು.'

God Grant me the serenity to
accept things I cannot change,
Courage to change things that I canand the wisdom to know the difference.-- Reinhold Niebur:




















M.B.ನಟರಾಜ್ ( ಕಾ: ೨೦೧೦)

Friday, May 14, 2010

ವಾಹನಾಸುರನ ಬಲಿ ಪಶು ಬೆಂಗಳೂರು ೧: ತಡೆಯುವುದೆಂತು ?



ವಾಹನಾಸುರನ ಬಲಿ ಪಶು ಬೆಂಗಳೂರು ೧: ತಡೆಯುವುದೆಂತು ?
ವಾಹನಗಳಿಗೆ ಜೀವ ಇಲ್ಲ. ದಾನವತ್ವ ದೈವತ್ವ ಚೇತನ ತುಂಬುವ ಶಕ್ತಿ ಅದನ್ನು ಉಪಯೋಗಿಸುತ್ತಿರುವ ಮಾನವನಿಗೆ ಇದೆ.. ಅವರು ಸಭ್ಯತೆಯಿಂದ ಮನುಷ್ಯರಂತೆ ವರ್ತಿಸಿದರೆ ಅವುಗಳ ಮೂಲಕ ಸಮಾಜದ ಸಭ್ಯತೆ ಗೌರವ ಪ್ರಕಟಗೊಳ್ಳುತ್ತದೆ ಪ್ರಕಾಶಿಸುತ್ತದೆ.
ಈ ಮಾತು ಭಾರತದಿಂದ ಹೊರ ಹೋಗಿ ಬಂದವರ ಎಲ್ಲರ ಅನುಭವ ಸತ್ಯ.
ರೀತಿ, ನೀತಿ ಇಲ್ಲದೆ ರೌದ್ರತೆ ರೋಷ ಭರಿತ ಅಮಾನುಶತ್ವ ವನ್ನು ಈ ೪೫೦೦ ಕಿ .ಮಿ. ರಸ್ತೆಗಳೆಂಬ ಮೈದಾನಗಳಲ್ಲಿ ತೋರಿದರೆ ಅವು ರಣ ರಂಗವೆಂಬ ಕಸಾಯಿ ಖಾನೆಯಲ್ಲದೆ ಇನ್ನೇನಾಗಬಲ್ಲುದು ? ಪ್ರತಿದಿನ ಕೊನೆಪಕ್ಷ ೩ ಅನಾವಶ್ಯಕ ಸಾವುಗಳು, ೧೦ ಗಾಯಾಳುಗಳು. ಇದರಿಂದ ಸಮಾಜಕ್ಕೆ, ರಾಜ್ಯಕ್ಕೆ ಆಗುವ ನಷ್ಟ - ಕೋಟ್ಯಾಂತರ ರೂಪಾಯಿಗಳು. ಇನ್ಶುರೆನ್ಸ್ , ಆಸ್ಪತ್ರೆ, ಕಳೆದುಕೊಂಡ ಗಳಿಕೆ/ಸಂಬಳ ಅದರಿಂದಾಗುವ ಸಾಮಾಜಿಕ ಹಾನಿ ಅಪಾರ.
ನಂದಾ ಎಂದರೆ ಅನೇಕರಿಗೆ ಮೊದಲು ಜ್ಞಾಪಕಕ್ಕೆ ಬರುವುದು BMW ಹಾಗು ಅದರಿಂದ ಸತ್ತ ಜೀವಗಳು.ಆ ಅಪಘಾತದ ಕೇಸಿನಿಂದ ತಪ್ಪಿಸಿಕೊಳ್ಳಲು ಅವನ್ನು ಮತ್ತು ಅವನ ಪರಿವಾರದವರು ಮಾಡಿದ ಧನದ ಮತ್ತು ರಾಜಕೀಯ ಪ್ರಭಾವಗಳ ಹರ ಪ್ರಯತ್ನ. ನಮ್ಮ ದೇಶದ ಅತಿ ಸಂಭಾವಂತ ಪ್ರಧಾನ ಮಂತ್ರಿ ಜಿ ಎಲ್ ನಂದಾ ಅಲ್ಲ.
ಸಾಲ್ಮಾನ್ ಖಾನ್ ಅಂದಕೂಡಲೇ ಅವನು ಮದ್ಯದ ಅಮಲಿನಲ್ಲಿ ಮಾಡಿದ ಮಾರಣಹೋಮದ ಆಹುತಿಗಳು.

ಅವನ ಪ್ರಸಿದ್ಧ ಹಂ ಆಪ್ಕೆ ಹೈ ಕೌನ್ , ಮೈನೆ ಪ್ಯಾರ್ ಕಿಯ ಚಲನ ಚಿತ್ರಗಳಲ್ಲ.
ಅದಕ್ಕೇ ದೊಡ್ದವರನ್ನುವುದು.
ಜೀವನ, ಸಮಾಜ ಮಕ್ಕಳಂತೆ, ಕನ್ನಡಿಯಂತೆ, ಮುಗುಳ್ನಕ್ಕರೆ ಮುಗುಳ್ನಗುತ್ತವೆ .
ರೋಷ ಕೆಂಡ ಕಾರಿದರೆ ಜ್ವಾಲಾಮುಖಿಗಲಾಗುತ್ತವೆ.

ವಾಹನಗಳು, ಸೆಲ್ ಫೋನ್ ಗಳು ನಮ್ಮ ಜೀವನವನ್ನು ಉತ್ತಮ ಗೊಳಿಸುವ ಸಲಕರಣೆಗಳು ಮಾತ್ರ.
ಮನಸ್ಸಿನಂತೆಯೇ. ಇಂಗ್ಲಿಷಿನಲ್ಲಿರುವ ಹೇಳಿಕೆಯಂತೆ Mind is a good servant but a bad master. ಮನಸ್ಸು ಒಳ್ಳೆಯ ಆಳು, ಆದರೆ ಕೆಟ್ಟ ಧಣಿ.

ಸಲಕರಣೆಗಳು ಕೂಡ ಹಾಗೆಯೇ.
ಅವುಗಳ ವಶಕ್ಕೆ ನಮ್ಮ ಜೀವನದ ಎಷ್ಟು ಭಾಗವನ್ನು ಮುಡುಪಾಗಿದುತ್ತೇವೆ ಅಥವಾ ಮುಡುಪಾಗಿಡಲು
ಸಿದ್ಧರಿದ್ದೇವೆ ಎಂಬುವ ನಿರ್ಧಾರ ಖಂಡಿತ ನಮ್ಮದು ಮತ್ತು ಕೇವಲ ನಮ್ಮದು. ಉಪಯೋಗ ಎಲ್ಲಿಗೆ ಮುಗಿಯುತ್ತದೆ ದುರುಪಯೋಗ ಎಲ್ಲಿ ಶುರುವಾಗುತ್ತದೆ ಎನ್ನುವುದು ನಮಗೆ ಗೊತ್ತಾಗುವ ಸಾಮರ್ಥ್ಯ ಕಳೆದುಕೊಂಡಿದ್ದೇವೆ ಎನ್ನುವುದು ನಮಗೇ ಗೊತ್ತಾಗುವುದಿಲ್ಲ. ಬೇರೆ ಯಾರಾದರು, ನಿಮ್ಮ ಹಿತೈಷಿಗಳು, ಮಿತ್ರರು ಅಥವಾ ಬೇರೆ ಯಾರಾದರು ಹೇಳಬೇಕು. ನಿನಗೆ ಈ ನಡುವೆ ಸರಿಯಾಗಿ ಕೇಳಿಸುವುದಿಲ್ಲ ಅಲ್ಲವೇ? ಅಥವಾ ಈ ನಡುವೆ ನಿನ್ನ ಕಣ್ಣು ಚೆನ್ನಾಗಿ ಕಾಣಿಸುತ್ತದೆಯೇ? ಅನ್ನುವ ಹಾಗೆ. ನನಗೆ ದೃಷ್ಟಿ ಮಾಂದ್ಯ ಇದೆ ಎನ್ನುವ ಅಂಶ ನನಗೆ ಗೊತ್ತಾಗಿದ್ದು ನನ್ನ ೮ನೆ ತರಗತಿಯ ಜೀವ ಶಾಸ್ತ್ರ ಅಧ್ಯಾಪಕಿ " ಕಣ್ಣು ಕಿವಿಚಿ ನೋಡುತ್ತೀಯ ನಿನಗೆ ಮಾಂದ್ಯ ವಿರಬೇಕು ಕಣ್ಣಿನ ತಜ್ಞರಿಗೆ ತೋರಿಸಿಕೋ" ಎಂದಾಗಲೇ. ಕಳೆದ ೪೭ ವರ್ಷಗಳಿಂದಲೂ ಕನ್ನಡಕ ಉಪಯೋಗಿಸುತ್ತಿದೇನೆ. ಸಲಕರಣೆಗಳಿಂದ ಆಗುವ ಹಾನಿಗಳು ಮರೆತುಹೋಗುವುದು ಅದರ ಉಪಯೋಗದ ಮತ್ತಿನಲ್ಲಿ ಮರೆತೇ ಹೋಗುವುದು ಬಹಳ ಸುಲಭ. ಪ್ರತಿನಿತ್ಯ ಬೆಂಗಳೂರಿನ ಉದ್ದಗಲ ಸೀಮಿತ ರಸ್ತೆಗಳಿಗೆ ೮೦೦ ವಾಹನಗಳು ರಾಕ್ಷಸ ಸಂತಾನದಂತೆ ಇಳಿಯುತ್ತಿವೆ. ಅಂದರೆ ಪ್ರತಿ ಕಿ ಮಿ ಉದ್ದದಲ್ಲಿ ಸುಮಾರು ೭೦ ವಾಹನಗಳು ನಿಂತಿರುತ್ತವೆ ಅಥವಾ ಓಡುತ್ತಿರುತ್ತವೆ. ಅವ್ಳುಗಳು ನಿಂತಿದ್ದರೂ ತೊಂದರೆ. ಏಕೆಂದರೆ ಮನುಷ್ಯನಿಗೆ ಕೇವಲ ೬ ಅಡಿ ಉದ್ದ ೩ ಅಡಿ ಅಗಲ ಜಾಗ ಮಲಗಲು ಸಾಕು ಆದರೆ ದ್ವಿಚಕ್ರಕ್ಕೆ ೮ ಮತ್ತು ೪ ಆದರೂ ಅಂದರೆ ಎರಡರಷ್ಟು ಬೇಕು! ಚಲಿಸುತ್ತಿರುವಾಗ ಅದರಿಂದಾಗುವ ಮೊದಲ ಮುಖ್ಯ ಹಾನಿ ಇತರರ ಆರೋಗ್ಯಕ್ಕೆ. ಪ್ರತಿನಿತ್ಯ ಬೆಂಗಳೂರಿನ ವಾಯು ಪರಿಸರದೊಳಕ್ಕೆ ವಾಹನಗಳು ೧೫೦೦ ಟನ್ಸ ವಿಶಾನಿಲಗಳನ್ನು ತುಂಬುತ್ತಿವೆ.
ಇದರಿಂದ , ಬೆಂಗಳೂರಿಗರು ಪ್ರತಿ ವರ್ಷ ೮೦೦ ಕೋಟ ರೂಪಾಯಿಗಳಷ್ಟು ಮಾಲಿನ್ಯ ಸಂಭಂದಿ ಆಸ್ತಮಾ, ಶ್ವಾಸ ಕೋಶ ಕ್ಯಾನ್ ಸೆರ್ , ಕೆಮ್ಮು, ನೆಗಡಿ ,ಕಣ್ಣಿನ ಉರಿ, ಉಸಿರಾಟದ ತೊಂದರೆಗಳು ಇತ್ಯಾದಿ ರೋಗಗಳಿಗಾಗಿ ಖರ್ಚು ಮಾಡುತ್ತಾ ಇದ್ದಾರೆ.
ಅಷ್ಟೇ ಅಲ್ಲದೆ , ಶಬ್ದ ಮಾಲಿನ್ಯದಿಂದ ಆಗುವ ತೊಂದರೆಗಳು ಅನೇಕ.
ರಸ್ತೆ ಎಂಬ ರಣರಂಗದ ಹೋಲಿಕೆಯ ಸೂಕ್ತತೆ ಇನ್ನೂ ಇಲ್ಲಿಗೇ ಮುಗಿಯದು..
ಅದು ನಿರ್ಜೀವ ವಸ್ತುವಾದರೂ ಅಲ್ಲಿ ನಡೆಯುವ ಯುದ್ಧದ ಪರಿಣಾಮ ನೀವು ಮನೆಯಿಂದ ಹೊರಡುವ ಮುಂಚೆಯೇ ನಿಮ್ಮನ್ನು ಚಡಪಡಿಸಿ ಮನೋ ಶಾಂತಿಯನ್ನು ಸಂಯಮತೆಯನ್ನು ಕಳೆದುಕೊಳ್ಳುವಂತೆ ಮಾಡುವ ಶಕ್ತಿ ಅದಕ್ಕಿದೆ. ಅದು ಅಲ್ಲಿ ನಿಮಗಿಂತ ಮುಂಚೆ ಇಳಿದ ಯೋಧರ ಸಾಮರ್ಥ್ಯದ ಮೇಲೆ ಅವಲಂಬಿಸಿದೆ.
ಒಂದು ವಿಧದಲ್ಲಿ ನಿಮ್ಮ ಪೂರ್ತಿ ದಿವಸದ ಸಂತೋಷ, ತಾಳ್ಮೆ, ಶಾಂತಿಯ ಪರೀಕ್ಷೆ ಮನೆಯ ಹೊರಗೆ ಒಂದು ಹೆಜ್ಜೆ ಇದುವ ಮೊದಲೇ ಮುಗಿದಿರುತ್ತದೆ.
ಈ ನಿತ್ಯಾನುಭವದ ಫಲಿತಾಂಶ ಕಾಲಾಂತರ ಬಡ್ಡಿಯ ಸಮೇತ ದೇಹ , ಮನೋ ಆರೋಗ್ಯ ಮುಖಾಂತರ ಒಮ್ಮೆಲೇ ಬೆಳಕಿಗೆ ಬರುತ್ತದೆ.
ಸೈಲೆಂಸೆರ್ ಇಲ್ಲದ , ಮ್ಯುಸಿಕಾಲ್/ಏರ ಹಾರನ್ ಕೊಂಬು ಕಹಳೆ ಗಳಿಂದ , ಅಥವಾ ಅತಿ ಶಭ್ಧ ಮಾಡುವಂತೆ ಅಳವಡಿಸಿ ಬದಲಾಯಿಸಿ ಚಲಿಸುವ ಗಾಡಿಗಳಿಂದ ಮತ್ತೆಂದಿಗೂ ಸರಿಪಡಿಸಲಾಗದ ಶಾಶ್ವತ ಕಿವುಡು , ತಲೆನೋವು, ಕೋಪ ತಾಪಗಳಿಂದ ಆಗುವ ಕೆಲಸ, ಕಾರ್ಯ ಮತ್ತು ಧನ ಹಾನಿಗಳಿಂದ ಬವಳುತ್ತಿದ್ದೇವೆ.
ಪ್ರತಿ ಒಂದು ಸೆಕೆಂಡ್ ಹಾರ್ನ್ ಬಾರಿಸುವುದರಿಂದ ಬೆಂಗಳೂರಿನ ೮೦೦೦ ನಾಗರೀಕರ ಕಿವಿಗಳು ಗಡಚಿಕ್ಕುತ್ತವೆ .
ರಾಜ, ಮಹಾರಾಜರುಗಳು ಅವರ ವೈರಿಗಳಿಗೆ ಚಿತ್ರಹಿಂಸೆ ಕೊಡಬೇಕೆಂದರೆ ಅವರ ಕಿವಿಯೊಳಗೆ ಕಾದ ಸೀಸ ಸುರಿಯಿತ್ತಿದ್ದರಂತೆ.
ಈ ನಮ್ಮ ಪ್ರಜಾಪ್ರಭುತ್ವ ದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಬೇಕಾದ ಸಮಯದಲ್ಲಿ ನಮ್ಮ ಚಾಲಕರು ಮಿತ್ರರು ವೈರಿಗಳು, ಮನೆಯವರು, ಪರರು ಎನ್ನುವ ಭೇಧ ಭಾವಗಲ್ಲಿಲ್ಲದೆ ಎಲ್ಲರ ಕಿವಿಯಲ್ಲೂ ಕಾದ ಸೀಸ ಸುರಿಯುತ್ತಿರುವುದು ಭಾರತದ ಪ್ರಜಾ ತಂತ್ರದ ವಿಶೇಷ ವೈಖರಿ !
ಇದನ್ನು ಕೂಡಲೇ ಬದಲಾಯಿಸಲು ಹೆಚ್ಚೇನೂ ಬೇಕಾಗಿಲ್ಲ.
೧) : ನನ್ನಿಂದ ಸಮಾಜಕ್ಕೆ ಉಪಯೋಗ ಅಲ್ಲದಿದ್ದರೂ ಕಿಂಚಿತ್ತೂ ಹಾನಿ ಆಗ ಕೂಡದು ಎಂಬ ಮನೋ ನಿರ್ಧಾರ .
೨) ಜೀವನವೆಲ್ಲ ನಾವು ಹೋರಾಡುವ ಶಾಂತಿ, ಸಮಾಧಾನದ ಸಾಧನ - ಎಲ್ಲೆಡೆಯಲ್ಲೂ ಸದಾಕಾಲವೂ ಶಬ್ದ ಮಾಲಿನ್ಯ ೪೫ ರಿಂದ ೬೫ ಡಿ ಬಿ ಒಳಗೆ ಇರಬೇಕು ಎನ್ನುವ ತೀರ್ಪನ್ನು - ಅತ್ಯುಚ್ಚ ನ್ಯಾಯಾಲಯ ನಮ್ಮಗಳ ಹಿತಕ್ಕೊಸ್ಕರವಾಗಿಯೇ ಸುಮಾರು ೧೦ ವರ್ಷಗಳ ಹಿಂದೆಯೇ ನೀಡಿದೆ. ಅದನ್ನು ಅಕ್ಷರಶಹ ಪಾಲಿಸುತ್ತೇವೆ, ಪಾಲಿಸಲು ಬೇಕಾದ ಎಲ್ಲ ವಿಧಿ ನಿಯಮಗಳನ್ನು ಪೋಲೀಸ್, ಬಿ ಎಂ ಪಿ ಇತ್ಯಾದಿ ಕಾಯ್ದೆಗಳ ಮುಖಾಂತರ ಹೊರಡಿಸಲು ಬೇಕಾದ ಎಲ್ಲ ಆಗ್ರಹಗಳನ್ನೂ ಮಾಡುತ್ತೇವೆ ಎಂಬ ಪ್ರತಿಜ್ಞೆ.
ಇದನ್ನು ಓದುವ ಓದಿದ ಎಲ್ಲ ಅಧಿಕಾರಿಗಳಲ್ಲಿ, ಪ್ರಜಾ ಪ್ರತಿನಿಧಿಗಳಲ್ಲಿ ವಿನಂತಿ: ನಿಮ್ಮ ಕೈಲಿ ಆಗುವುದೆಲ್ಲ ತತ್ಕ್ಷಣ ಮಾಡಿ ನಾಳೆಗೆ, ಇನ್ನೊಬ್ಬರಿಗೆ ಕಾಯಬೇಡಿ.
ಎಲ್ಲರ ಹಿತ ರಕ್ಷಣೆಯೊಡನೆ ನಿಮ್ಮ ಮತ್ತು ಪರಿವಾರದವರ ಆರೋಗ್ಯ ಶಾಂತಿಯೂ ಉಳಿಯುತ್ತದೆ.
ಈ ಸಂಧರ್ಭದಲ್ಲಿ ಖ್ಯಾತ ಪಾಶ್ಚಾತ್ಯ ತತ್ವ ಚಿಂತಕ ರೈನ್ ಹೋಲ್ಡ್ ನೀಬರ್ ಹೇಳಿದ ಉಕ್ತಿ - ಪ್ರಾರ್ಥನೆ ಅತ್ಯುಚಿತ. ಎಲ್ಲರಿಗೂ ಅನ್ವಯಕಾರಕ.

'ದೇವರೇ, ನನ್ನ ಕೈಲಾಗದ ಸನ್ನಿವೇಶಗಳನ್ನು ಅಂಗೀಕರಿಸುವ ತಾಳ್ಮೆ ಯನ್ನು ಕೊಡು,
ಕೈಲಾಗುವ ಸನ್ನಿವೇಶಗಳನ್ನು ಬದಲಾಯಿಸುವ ಧೈರ್ಯ ಸ್ಥೈರ್ಯ ಕೊಡು,
ಆಗುವ ಆಗದ ಸನ್ನಿವೇಶಗಳನ್ನು ತಿಳಿದುಕೊಳ್ಳುವ ಪ್ರಜ್ಞೆ ಯನ್ನು ಕೊಡು.'
God Grant me the serenity to
accept things I cannot change,
Courage to change things that I can
and the wisdom to know the difference.-- Reinhold Niebur:






M.B.ನಟರಾಜ್ ( ಕಾ: ೨೦೧೦)MS(Georgetown Univ, Wash DC)Registered Medical TechnologistAmerican Medical Technologists-USAMicrobiologist/Medical TechnologistBangalore-560086