Friday, July 2, 2010

ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ?

ಇತ್ತೀಚಿನ ಒಂದು ಘಟನೆಯೇ ಈ ಆಲೋಚನೆಗೆ ಮೂಲ ಕಾರಣ.

ಮೊದಲನೆಯ ನೋಟಕ್ಕೆ ಇದು ಅಷ್ಟು ದೊಡ್ಡ ಅಪರಾಧವೆಂದು ಅನ್ನಿಸದು.

ಆದರೆ ಸ್ವಲ್ಪ ಆಲೋಚನೆ ಮಾಡಿ ನೋಡಿದರೆ ಈ ಬಗೆಯ ಸಣ್ಣ ಸಣ್ಣ ದಿನಂಪ್ರತಿ ಆಗುವ ಮತ್ತು ನಾವು

ತಡೆದು ಕೊಳ್ಳುತ್ತಿರುವ ಪ್ರಸಂಗಗಳಿಂದಲೇ ನಮ್ಮ ದೇಶ ಹಾಳಾಗುತ್ತಿರುವ ಮುಖ್ಯ ಕಾರಣವನ್ನು ಕಾಣ ಬಹುದು.

ಎರಡು ವರ್ಷಗಳ ಕೆಳಗೆ ನನ್ನ ಮಗನ ದ್ವಿಚಕ್ರ ವಾಹನ ಶಿರಸ್ತ್ರಾಣ ಧರಿಸದೆ ನಡಿಸುತ್ತಿದ ಉಲ್ಲಂಘನೆಯ ಸೂಚನೆ ಬಂತು.

ಕಾನೂನು ಪರಿಪಾಲನೆಯ ಕರ್ತವ್ಯದ ಸಂಪೂರ್ಣ ಅರಿವಿದ್ದ ಅವನನ್ನು ಕೇಳಿದಾಗ ಸಾಧ್ಯವೇ ಇಲ್ಲವೆಂದು ಹೇಳಿದ.

ಆದರೂ ಅಕಸ್ಮಾತ್ ಅವನ ಸ್ನೇಹಿತರು ಯಾರಾದರೂ ಒಂದು ಕ್ಷಣ ತೆಗೆದುಕೊಂಡು ಹೋಗಿದ್ದರೆ ಹೊಗಿರಬಹುದೆಂಬ ಸಣ್ಣ
ಸಂಶಯದಿಂದ ಕೇವಲ ೧೦೦ ರೂಪಾಯಿ ಎಂದು ಕಟ್ಟಿ ಬಿಟ್ಟೆ.
ಈಗ ಒಂದು ವರ್ಷದ ಹಿಂದೆ ಇನ್ನೊಂದು ಅದೇ ದಿವಸ, ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಅದೇ ಉಲ್ಲಂಘನೆ ಆದರೆ ಸೆಲ್ ಫೋನ್ ಉಪಯೋಗಿಸುತ್ತಿದ ಉಲ್ಲಂಘನೆಯೋಟ್ಟಿಗೆ ಬಂದಿತು.

ಆದರೆ ಈ ಬಾರಿ ಈ ಸೂಚನೆಯನ್ನು ನಂಬುವುದಕ್ಕೆ ಒಂದೇ ತೊಂದರೆ. ನನ್ನ ಮಗ ಅಮೇರಿಕಾದಲ್ಲಿ ಇದ್ದ.

ಆ ಸ್ಕೂಟರ್ನ ಏಕೈಕ ಚಾಲಕಿ ನನ್ನ ಮಗಳು ಅದೇ ಸಮಯಕ್ಕೆ ಮನೆಯಲ್ಲೇ ನಡೆಯುತ್ತಿದ್ದ ವರಲಕ್ಷ್ಮಿ ವ್ರತ, ಗೃಹ ಪ್ರವೇಶದಲ್ಲಿ ಭಾಗವಹಿಸುತ್ತಿದಳು.

ಅಷ್ಟೇ ಸಾಲದೆಂಬಂತೆ ಆಗ ತೆಗೆದುಕೊಂಡ ವೀಡಿಯೋದಲ್ಲಿ ಅವಳೂ, ಮತ್ತು ಅಲ್ಲೇ ಬಾಗಿಲಲ್ಲೇ ನಿಂತಿದ್ದ ಸ್ಕೂಟರ್ನ ಚಿತ್ರಗಳೂ ಇದ್ದವು.

ಈ ಬಾರಿ ೨೦೦ ರೂಪಾಯಿ ದಂಡ.
ಸತ್ಯಾಂಶ ತಿಳಿದಿದ್ದ ನಾನು ಮೇಲಧಿಕಾರಿಗಳಿಗೆ- ಮುಖ್ಯ ಮಂತ್ರಿಗಳೊಳಗೊಂDu   - ದೂರು ಕೊಟ್ಟೆ.

ಹಾಗೂ ಪ್ರತಿ ತಿಂಗಳು ಏನಾಯಿತೆಂದು ಕಡೆಯ ೧೧ ಬಾರಿ ಎಲ್ಲರಿಗೂ ಕೇಳಿ ಬರೆದೆ.

ಈಗ ೪ ದಿನದ ಕೆಳಗೆ, ನಾನು ಹೇಳಿದ ಅಂಶಗಳನ್ನು ಕಡೆಗಣಿಸಿ,ಆ ಸ್ಥಳದಲ್ಲಿದ್ದ # ೧೧೩೦೩ ಯ ಪುಸ್ತಕದಲ್ಲಿ ವರದಿ ನಮೂದಿಸಲಾಗಿದೆ, ಹಾಗು ಅದರ ಕ್ಷೆರಾಕ್ಸ್ ಕಾಪಿಯನ್ನು

-ಲಗತ್ತಿಸದೆ- ಲಗತ್ತಿಸಿ ದ್ದೇವೆ. ಆದ್ದರಿಂದ ನಿಮಗೆ ಕಳಿಸಿರುವ ಸೂಚನೆ ಸರಿಯಾಗಿದೆ ಎಂಬ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ, ಫಿರ್ಯಾದಿಯನ್ನು ಕೊನೆಗೊಳಿಸುವ ಸಮಜಾಯಿಷಿಯನ್ನು ಕಳಿಸಿದರು.

ಈ ಬಗ್ಗೆ ಏನು ಮಾಡುವುದೆಂದು ತಿಳಿಯದೆ ಕೆಲವು ನಿದ್ರಾ ರಹಿತ ರಾತ್ರಿಗಳಿಂದ ಚಡಪಡಿಸಿದೆ. ಇದನ್ನು ಅನೇಕರಿಗೆ ಹೇಳಿ ಕೊಂಡು, ೩೦೦ ರೂಪಾಯಿ ತಾನೇ ಹೋದರೆ ಹೋಗಲಿ ಹಾಳಾಗಿ ಹೋಗಲಿ ಬಿಡಿ ಎಂಬ

ಎಂಬ ಅನುಭವಾಮೃತ ಭರಿತ ಬುದ್ಧಿವಾದವನ್ನೂ ಸ್ವಾದಿಸಿದೆ.

ಆದರೆ ಸತ್ಯಕ್ಕೊಸ್ಕರ ಇ ಷ್ಟೆಲ್ಲ ಕಷ್ಟ ಪಟ್ಟರೂ ಏನೋ ಅನ್ಯಾಯವಾಗಿದೆ ಅನ್ನುವ ಕೊರಗು ಕಾಡುತ್ತಲೇ ಇತ್ತು. ತಲೆ ತಿನ್ನುತ್ತಲೇ ಇತ್ತು.

ಇದ್ದಕ್ಕಿದ್ದ ಹಾಗೆ, ಈ ಪುರಾವೆಯನ್ನು ಸೃಷ್ಟಿಸಿದ ಸಿಬ್ಬಂದಿ ,ಉತ್ತ್ತರವನ್ನು ಕಳಿಸಿದ ಅಧಿಕಾರಿ ಗಳನ್ನು ಎಲ್ಲೆಡೆ ಆವರಿಸಿಕೊಂಡಿರುವ ಮಹಾತ್ಮಾ ಗಾಂಧೀ ಯವರ ಫೋಟೋ ಹಾಗೂ ಅವರ ಪ್ರಸಿದ್ಧ

ಉಕ್ತಿ ಸತ್ಯಂ ಏವ ಜಯತೆ ಕಣ್ ಕಟ್ಟಿತು. ಹಾಗಾದರೆ ಹಗಲೂ ರಾತ್ರಿ ಎಲ್ಲಾ ಅಧಿಕಾರಿಗಳ , ರಾಜಕಾರಣಿಗಳ , ನ್ಯಾಯ ಮೂರ್ತಿಗಳ , ಬಾಯಿಂದ ಪ್ರತಿ ಅವಕಾಶದಲ್ಲೂ ಹೊರಡುವ ಈ ಉಕ್ತಿಗೆ ಏನು ಬೆಲೆ?

ಹಾಗು ಎಲ್ಲರಂತೆಯೇ ನಾನೂ ಹೀಗೆಯೇ ಸುಮ್ಮನಾದರೆ ಸತ್ಯದ ಹೋರಾಟದ ಬೆಲೆ ಕೇವಲ ೨೦೦ ರೂಪಯಿಗಳೇ ಏನು ಅನ್ನುವ ಪ್ರಶ್ನೆಯೂ ಧಿಟ್ ಎಂದು ಉದ್ಭವಿಸಿತು.

ಅದಕ್ಕೂ ಮುಖ್ಯವಾಗಿ, ಹೀಗೆ ಸುಳ್ಳು ಪುರಾವೆಗಳಿಂದ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುವ ಪದ್ಧತಿ, ಸಂಸ್ಕೃತಿಯ ಬಗ್ಗೆ ಹೇಸಿಗೆಯೂ ಉಂಟಾಯಿತು.

ಈ ರೀತಿ ರಿವಾಜಿನಿಂದ ಸತ್ಯದ ಕೊಲೆ ಆಗುತ್ತಿಲ್ಲವೇ ಎನ್ನುವ ಪ್ರಶ್ನೆ ಕಾಡಲು ಶುರು ಮಾಡಿತು.ಹನಿಗೂಡಿದರೆ ಹಳ್ಳ, ಸಣ್ಣ ಸಣ್ಣ ಸುಳ್ಳುಗಳ ಮಹಾ ಪೂರವೇ ಆಗುತ್ತಿದೆ ನಮ್ಮ ದೇಶ ಎಂದೂ ಅನ್ನಿಸಿತು.

ಆ ಪ್ರಶ್ನೆಯನ್ನೇ ಅದೇ ಅಧಿಕಾರಿಗಳ ಮುಂದಿಟ್ಟಿದ್ದೇನೆ.

ಏನಾಗುವುದೆಂದು ನೋಡೋಣ!

No comments:

Post a Comment