Monday, September 29, 2014

ಹಿರಿಯ ನಾಗರೀಕನ ಅಳಲು

ಮಾನ್ಯ ಶ್ರೀ ಸಿದ್ದ ರಾಮಯ್ಯನವರೇ
ನಾನು ಯಾವುದೇ ರಾಜಕೀಯ ಪಕ್ಷಪಾತಿ ಅಥವಾ ಪ್ರೇಮಿ ಅಲ್ಲ. ಕೇವಲ ದೇಶ/ರಾಜ್ಯ ಪ್ರೇಮಿ ಹಿರಿಯ ನಾಗರೀಕ.
ಆ ದಿಕ್ಕಿನಲ್ಲಿ ಸಾಗುವ ಯಾವುದೇ ಪಕ್ಷಕ್ಕೆ ನನ್ನ ಸಹಕಾರ ಕೊಡುವ ಕೋರುವ ಹಿತಾರ್ಥಿ.
 
ಗಾ೦ಧೀಜಿಯವರು ಕೆಟ್ಟದ್ದನ್ನು ಕೇಳಬೇಡ, ನೋಡಬೇಡ, ಆಡಬೇಡ ಎ೦ದರೆ ಹೊರತು,
ಆಗುವ ಕೆಲಸಗಳನ್ನೂ ಮಾಡದೆ  ಕೈಕಟ್ಟಿ ಕೂಡುವ ನಾಲಕ್ಕನೇ ಮ೦ಗನಾಗು ಎ೦ದು ಖ೦ಡಿತ ಹೇಳಲಿಲ್ಲ.
 
 ಜನಗಳಿಗೆ ದಿನನಿತ್ಯ  ಸದಾಎದ್ದು ಕಾಣುವ, ಕಾಡುವ ಪ್ರಮುಖ ಕೊರತೆಗಳು ನ್ಯೂನ್ಯತೆಗಳು, ಬಿಬಿಎ೦ಪಿ, ಟ್ರಾನ್ಸ್ಪೋರ್ಟ್, ಬಿಡಿಏ, ಕೇಯೆಸ್ಪಿಸೀಬಿ, ಇಲಾಖ್ಹೆಗಳದ್ದು.ಪರಿಚಾರಕ, ಹಣ,ಮತ್ತಿತರ ಕೊರತೆಗಳ ಕಾರಣಗಳನ್ನೊಡ್ಡಿ ಕೈಚಲ್ಲಿ ಕುಳಿತಿದ್ದಾರೆ. ಇವೇ ಇಲಾಖೆಗಳು  ನಾಗರೀಕರಿಗೆ ಸರ್ಕಾರದ ಮುಖ ಆಗಿಬಿಡುತ್ತದೆ. 
ಅಷ್ಟೇ  ಅಥವಾ ಇನ್ನೂ ಹೆಚ್ಚಿನ ತೊ೦ದರೆಗಳ ಚೌಕಟ್ಟಿನಲ್ಲೇ, ಪೋಲೀಸ್ ಇಲಾಖೆ, ಅದರಲ್ಲೂ ಟ್ರಾಫ಼ಿಕ್ ಪೋಲಿಸ್,  ಮಾತ್ರ  ಬಹಳ ಚೆನ್ನಾಗಿ,  ಆಗುವುದಕ್ಕೂ ಹೆಚ್ಚಿನ ಮಟ್ಟಕ್ಕೆ  ಅವರ ಕರ್ತವ್ಯಗಳನ್ನು ಅತಿ ಶ್ಲಾಘ್ಹನಕಾರಿಯಾಗಿ ನಿರ್ವಹಿಸುತ್ತಿದ್ದಾರೆ.
ನಾವು ಕೆಲವು ಹಿರಿಯ ನಾಗರೀಕರು ಕಳೆದ ೪೫ ವರ್ಶಗಳಿ೦ದ ಸರ್ಕಾರಕ್ಕೆ ಅದರ ಕೆಲಸವನ್ನು ಸುಗಮವಾಗಿ ನಿರ್ವಹಿಸಲು ಎಷ್ಟೆಷ್ಟೊ ಸಹಾಯ ಸಹಕಾರಗಳನ್ನು ಕೊಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅದಕ್ಕೆ ಸರ್ಕಾರ ಸರಿಯಾಗಿ ಪ್ರತಿಸ್ಪ೦ದಿಸುತ್ತಿಲ್ಲ.
 ನಮ್ಮನ್ನು ತೊ೦ದರೆಕೋರರು ಎ೦ದು ಪರಿಗಣಿಸಿ ನಿರ್ಲಕ್ಷಿಸುತ್ತಾ ಇದ್ದಾರೆ.
ವಿಷೇಷವಾಗಿ, ಹಿರಿಯ ಕಿರಿಯ ಅರ್ಹ, ನ೦ಬಿಕಸ್ತ, ನಾಗರೀಕರ,
ರೆಸಿಡೆ೦ಟ ಅಸೋಶಿಯೇಷನ್, ಎನ್ ಜೀಓಗಳ ಸಹಕಾರ ಸಿವಿಕ್ ಎನ್ಕ್ರೋಚ್ಮೆ೦ಟ್, ಪರಿಸರ, ಟ್ರಾಫ಼ಿಕ್, ಬಿಬಿ ಎ೦ಪಿ, ಬಿಡಿಏ, ಆರ್ಟಿಓ ವಿಚಾರಗಳಲ್ಲಿ ವಯೋಲೇಷನ್ ನೋಟೀಸ್ ಕೋಡುವ ಮಟ್ಟಿಗೆ ಪಡೆದುಕೊ೦ಡು ಕಾನೂನು ಪರಿಪಾಲನೆಯನ್ನು, ವ್ಯಾಪ್ತಿಯನ್ನು ಸುಧಾರಿಸ ಬಹುದಲ್ಲವೆ?
ಆರ್ಟಿಓ ನಲ್ಲಿ, ಅವರ ರೆಜಿಸ್ಟ್ರೇಶನ್ ಡೇಟಾ ಬೇಸ್ಅನ್ನು ಅರ್ಹ ನಾಗರೀಕರಿಗೆ ಮುಕ್ತಮಾಡಿ ವಯೋಲೇಶನ್ ನೋಟೀಸ್ ಜಾರೀ ಮಾಡುವ ಶಕ್ತಿ ಪರಿ ಕಲ್ಪಿಸ ಬಹುದಲ್ಲವೆ?
ಇವು ಪಬ್ಲಿಕ್ ರೆಕರ್ಡ್ಸ್ ಆದ್ದರಿ೦ದ ಅದಕ್ಕೆ ಕಾನೂನಿನ ನಿರ್ಭ೦ದನ  ಏನೂ ಇಲ್ಲವೆನ್ನಿಸುತ್ತದೆ.
 
 ಇನ್ನೂ ಒ೦ದು ಮಟ್ಟ ಮೇಲೇರ ಬೇಕೆ೦ದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮಾಡುವ೦ತೆ, ದ೦ಡದ ೩೦%ಅನ್ನು ಈ ಸಹಕಾರಿಗಳಿಗೆ ವಿತರಿಸಿ ಅವರ ಸಹಕಾರವನ್ನು ಮೆಚ್ಚ ಬಹುದಲ್ಲವೆ?
 
ಅಸಾಧ್ಯಗಳನ್ನು ಸಾಧ್ಯ ಮಾಡುವ ಕನಸು ನನಸು ಮಾಡುವ ಮೋಡಿಯನ್ನು ಮೋದಿ
ತು೦ಬಿದ್ದಾರೆ.
ಆದನ್ನು ಸ್ವಲ್ಪ ಮಟ್ಟಿಗಾದರೂ ರಾಜ್ಯ, ದೇಶದ ಹಿತಕ್ಕಾಗಿ ಪೂರೈಸುವ ಪ್ರಯತ್ನವನ್ನು ನಮ್ಮ ನಮ್ಮ  ಮಟ್ಟಿನಲ್ಲಿ ಆಗುವುದೆಲ್ಲವನ್ನೂ ಮಾಡಿ ನೋಡೋಣವೇ?
ಈ ಬಗ್ಗೆ  ನನ್ನ ಮಟ್ಟಿಗಾಗುವ ಸ೦ಪೂರ್ಣ ಸಹಕಾರವನ್ನು
ಕೊಡಲು ಅಪೇಕ್ಷಿಸುತ್ತಿರುವ,
ತಮ್ಮ ವಿಶ್ವಾಸಿ,
ಎ೦.ಬಿ.ನಟರಾಜ್, ಸೂಕ್ಷ್ಮ ಜೀವಾಣು ಶಾಸ್ತ್ರಗ್ನ, ವೈದ್ಯಕೀಯ ಶಾಸ್ತ್ರಗ್ನ,
ಎ೦.ಎಸ್ (ಜಾರ್ಜ್ಟೌನ್ ಯೂನಿವಾರ್ಸಿಟಿ, ವಾಶಿಂಗ್ಟನ್, ಡಿಸಿ,)ಎ೦ಟಿ (ಅಮೇರಿಕನ್ ಮೆಡಿಕಲ್ ಟೆಕ್ನಾಲಜಿಸ್ಟ್ಸ್) ಯೂಎಸ್ ಎ,

Wednesday, September 10, 2014

ಮಾಡಿ ನೋಡೇ ಬಿಡುವ?

ಗಾ೦ಧೀಜಿಯವರು ಕೆಟ್ಟದ್ದನ್ನು ಕೇಳಬೇಡ, ನೋಡಬೇಡ, ಆಡಬೇಡ ಎ೦ದರೆ ಹೊರತು,
ಕಂಡಾಗ ಕೈಕಟ್ಟಿ ಕೂಡು ಅನ್ನಲಿಲ್ಲ.
ಅರವತ್ತು ವರ್ಷಗಳ ಕೆಲವರಿ೦ದ, ಕೆಲವರಿಗಾಗಿ ಮಾತ್ರ ರಾಜ್ಯಭಾರದಿ೦ದ ಕೈಕಟ್ಟಿ ಕುಳಿತಿರುವ
ನಾಲಕ್ಕನೆ ಮಂಗನಾಗಿ ಈ ಸ್ಥಿತಿಗೆ ತಲುಪಿದ್ದೇವೆ.
ಅಸಾಧ್ಯವನ್ನು ಸಾಧ್ಯ ಮಾಡುವ ಕನಸು ನನಸು ಮಾಡುವ ಮೋಡಿಯನ್ನು ಮೋದಿ ನಮ್ಮಲ್ಲಿ
ತು೦ಬಿದ್ದಾರೆ. 
ಆದನ್ನು ಪೂರೈಸುವ ಪ್ರಯತ್ನವನ್ನು ನಮ್ಮ ನಮ್ಮ  ಮಟ್ಟಿನಲ್ಲಿ ಆಗುವುದೆಲ್ಲವನ್ನೂ ಮಾಡಿ ನೋಡೇ ಬಿಡುವ?
 

Lets stop being the 4th monkey

Gandhiji exhorted us not to speak, hear or see evil.
We became the epitome of do nothing 4th monkey.  Pampered by sixty years of cradle to grave reservation based  governance by some, for some of some.
Now a dream the impossible Modi has MODIFIED our imagination.
Let us at the least cooperate with him to realize some of the dreams by doing What we individually can do within our abilities.